ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಜಾಗೃತಿಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ,ಡಯಟ್ ಅಥವಾ ಫ್ರೀ ಡೈವ್ ಮಾಡುತ್ತಿರೋ ಇಲ್ಲವೋ ಎಂಬುದು ಮುಖ್ಯವಲ್ಲ,- ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.
ಅದರ ಪರಿಣಾಮಗಳೇನು?
* ಮೆದುಳಿನ ಕಾರ್ಯ ಶಕ್ತಿಯ ಹೆಚ್ಚಳ: ನೆನಪು, ಅವಧಾನ ಮತ್ತು ಏಕಾಗ್ರತೆಯ ಸುಧಾರಣೆ
* ಆತಂಕ ನಿವಾರಣೆ
* ಒತ್ತಡವನ್ನು ನಿಗ್ರಹಿಸಿ, ಶರೀರದ ಸಹನಾಶಕ್ತಿಯನ್ನು ಹೆಚ್ಚಿಸುತ್ತದೆ
* ಸಂಜೆ ಹೊತ್ತಿನ ಹಸಿವಿನ ದಾಳಿಯನ್ನು ಕಡಿಮೆಮಾಡಿ, ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಸಹಾಯಕವಾಗಿದೆ
* ನೆಗಡಿ,ಮೈಗ್ರೇನ್ ಮತ್ತು ಅಸ್ತಮಾ ಬರುವುದನ್ನು ಕಡಿಮೆ ಮಾಡುತ್ತದೆ
* ಸುಖಕರ ನಿದ್ದೆಗೆ ಸಹಾಯಕಾರಿ
* ಸ್ವರ ಮತ್ತು ಉಸಿರು ಹಿಡಿತದ ಸಮಯ ಹೆಚ್ಚಿಸುವುದರಿಂದ ಸಂಗೀತಗಾರರು ಮತ್ತು ಫ್ರೀ ಡೈವ್ ಮಾಡುವವರಿಗೆ ಸಹಾಯಕಾರಿ
ಪ್ರಾಣ ಬ್ರೆತ್ ಏಕೆ?
* ಯಾವುದೇ ಜಾಹಿರಾತು ಇಲ್ಲ
* ಬ್ಯಾಟರಿ ಉಳಿತಾಯದೊಂದಿಗೆ ವೇಗ ಮತ್ತು ಹೊಂದಾಣಿಕೆ
* ಸುಲಭ- ಕೇವಲ "ಪ್ಲೇ" ಮೇಲೆ ಟ್ಯಾಪ್ ಮಾಡಿ. ಕಣ್ಣು ಮುಚ್ಚಿ, ನಿಮಗೆ ಕೇಳಿಸುವ ಧ್ವನಿಗೆ ಮಾರ್ಗದರ್ಶನ ಮಾಡಲು ಬಿಡಿ
* ತರಬೇತಿ ಸಮಯದಲ್ಲಿ ಸ್ಕ್ರೀನ್ ಆಫ್ ಮಾಡುವ ಆಯ್ಕೆ ಇದೆ
* ವಿವಿಧ ಉದ್ದೇಶಗಳಿಗಾಗಿ 8 ಬಗೆಯ ಉಸಿರಾಟದ ವಿಧಾನಗಳಿವೆ
* ನಿಮಗೆ ನಿಮ್ಮದೇ ಆದ ಸ್ವಂತ ವಿಧಾನಗಳನ್ನು ರಚಿಸಲು ಅವಕಾಶವಿದೆ
* ಸಂಪದ್ಭರಿತವಾದ ಅಂಕಿ ಅಂಶಗಳು
* ಅಭ್ಯಾಸಕ್ಕೆ ಅನುಕೂಲಕರವಾದ ವೇಳಾಪಟ್ಟಿ ರಚಿಸಲು ನೆನಪಿಸುವುದು
* ಪ್ರಾಣಾಯಾಮ,ಸೂಫಿ ಮತ್ತು ಟಿಬೆಟಿಗರ ಉಸಿರಾಟ ಪದ್ಧತಿಗಳಿಂದ ಹೆಚ್ಚಿನ ವಿಧಾನಗಳನ್ನು ರೂಪಿಸಲಾಗಿದೆ
* ಭಾವನಾ ಪ್ರಚೋದಿತ ತಿನ್ನುವ ಗೀಳಿನ ನಿಯಂತ್ರಣಕ್ಕೆ, ಗೂಗಲ್ ನವರ ಏಕ ಮಾತ್ರ "ಹಸಿವು ನಿಯಂತ್ರಣ" ತರಬೇತಿ
* ಸಿಮೊನ್ ರಿಘಿನಿಯವರು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿರುವ "ಸಿಗರೇಟ್ ನ ಬದಲಿಗೆ"ಅಭ್ಯಾಸ, ನೀವು ಧೂಮಪಾನ ತ್ಯಜಿಸಲು ಸಹಾಯಕ
ಗುರು ಆವೃತ್ತಿಗಾಗಿ ಹೆಚ್ಚುವರಿ ಅಂಶಗಳು:
* ಸುಧಾರಣೆಗಾಗಿ ಮತ್ತು ಅತ್ಯಾಧುನಿಕ ವಿಧಾನಗಳಿಗಾಗಿ ಡೈನಾಮಿಕ್ ಟ್ರೇನಿಂಗ್ಸ್
* ವಿವಿಧ ಉಸಿರಾಟದ ವಿಧಾನಗಳು ಮತ್ತು ಮಂತ್ರಗಳು
* ವಿವರವಾದ ಪ್ರಗತಿ ಚಾರ್ಟ್ ಮತ್ತು ಟ್ರೇನಿಂಗ್ ಲಾಗ್
* ಅರೋಗ್ಯ ಪರೀಕ್ಷೆಗಳು
* ಪುಷ್ಟೀಕರಿಸಿದ ಸೆಟ್ಟಿಂಗ್ ಗಳು ಮತ್ತು ಹೆಚ್ಚಿನ ಧ್ವನಿಗಳು
* ನಿಯಮಿತವಾಗಿ 4-7-8 ಉಸಿರಾಟ, ಕಪಾಲಭಾತೀ, ಆನುಲೋಮ ವಿಲೋಮ, ನಾಡಿ ಶೋಧನ, ಟುಮೊ, ಉದ್ಗೀತ ಮುಂತಾದ 50ಕ್ಕೂ ಹೆಚ್ಚಿನ ತರಬೇತಿ ಮಾದರಿಗಳ ನವೀಕರಿಸಿದ ಡೇಟಾಬೇಸ್
ವೈಜ್ಞಾನಿಕ ಪುರಾವೆಗಳು https://pranabreath.info/wiki/Research_articles
ಫೋರಮ್ https://pranabreath.info/forum
ಫೇಸ್ ಬುಕ್ https://facebook.com/OlekdiaPranaBreath
ಅಪ್‌ಡೇಟ್ ದಿನಾಂಕ
ಅಕ್ಟೋ 12, 2023