ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ Pixel ಕ್ಯಾಮರಾದೊಂದಿಗೆ ಒಂದು ಕ್ಷಣವನ್ನೂ ಕಳೆದುಕೊಳ್ಳಬೇಡಿ ಹಾಗೂ ಪೋರ್ಟ್ರೇಟ್, ನೈಟ್ ವಿಷನ್, ಟೈಮ್ ಲ್ಯಾಪ್ಸ್ ಮತ್ತು ಸಿನಿಮ್ಯಾಟಿಕ್ ಬ್ಲರ್‌ನಂತಹ ಫೀಚರ್‌ಗಳನ್ನು ಬಳಸಿಕೊಂಡು ಅದ್ಭುತ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯಿರಿ.
ಅಚ್ಚರಿಗೊಳಿಸುವ ಫೋಟೋಗಳನ್ನು ತೆಗೆಯಿರಿ
• HDR+ ಜೊತೆಗೆ ಎಕ್ಸ್‌ಪೋಶರ್ ಮತ್ತು ವೈಟ್ ಬ್ಯಾಲೆನ್ಸ್ ಕಂಟ್ರೋಲ್‌ಗಳು - ವಿಶೇಷವಾಗಿ ಕಡಿಮೆ ಬೆಳಕಿರುವ ಮತ್ತು ಹಿಂಬೆಳಕು ಇರುವ ದೃಶ್ಯಗಳಲ್ಲಿ HDR+ ಬಳಸಿಕೊಂಡು ಅಸಾಧಾರಣ ಫೋಟೋಗಳನ್ನು ತೆಗೆಯಿರಿ.
• ನೈಟ್ ವಿಷನ್ - ನಿಮ್ಮ ಫ್ಲ್ಯಾಶ್ ಅನ್ನು ನೀವು ಮತ್ತೊಮ್ಮೆ ಎಂದಿಗೂ ಬಳಸಲು ಬಯಸುವುದಿಲ್ಲ. ಕತ್ತಲೆಯಲ್ಲಿ ಕಳೆದುಹೋಗುವ ಎಲ್ಲಾ ವಿವರಗಳು ಮತ್ತು ಬಣ್ಣಗಳಿಗೆ ನೈಟ್ ವಿಷನ್ ಜೀವ ತುಂಬುತ್ತದೆ. ಆಸ್ಟ್ರೋಫೋಟೋಗ್ರಫಿ ಮೂಲಕ ನೀವು ಮಿಲ್ಕಿ ವೇ ಫೋಟೋಗಳನ್ನು ಸಹ ಸೆರೆಹಿಡಿಯಬಹುದು!
• ಸೂಪರ್ ರೆಸೊಲ್ಯೂಶನ್ ಝೂಮ್ - ಬಹಳ ದೂರವಿದ್ದರೂ ಹತ್ತಿರ ಬನ್ನಿ. ನೀವು ಝೂಮ್ ಇನ್ ಮಾಡಿದಾಗ ಸೂಪರ್ ರೆಸೊಲ್ಯೂಶನ್ ಝೂಮ್ ನಿಮ್ಮ ಚಿತ್ರಗಳ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.
• ಲಾಂಗ್ ಎಕ್ಸ್‌ಪೋಷರ್ - ದೃಶ್ಯದಲ್ಲಿರುವ ಚಲಿಸುವ ವಿಷಯಗಳಿಗೆ ಸೃಜನಾತ್ಮಕ ಬ್ಲರ್ ಅನ್ನು ಸೇರಿಸಿ
• ಆ್ಯಕ್ಷನ್ ಪ್ಯಾನ್ - ನಿಮ್ಮ ವಿಷಯವನ್ನು ಫೋಕಸ್‌ನಲ್ಲಿ ಇರಿಸುವುದರ ಜೊತೆಗೆ ಹಿನ್ನೆಲೆಗೆ ಸೃಜನಾತ್ಮಕ ಬ್ಲರ್ ಅನ್ನು ಸೇರಿಸಿ
• ಮ್ಯಾಕ್ರೊ ಫೋಕಸ್ - ಸಣ್ಣ ವಿಷಯಗಳಲ್ಲಿಯೂ ಸಹ ಸ್ಪಷ್ಟ ಬಣ್ಣ ಮತ್ತು ಆಕರ್ಷಕ ಕಾಂಟ್ರ್ಯಾಸ್ಟ್
ಪ್ರತಿ ಟೇಕ್‌ನಲ್ಲಿಯೂ ಅಸಾಧಾರಣ ವೀಡಿಯೊಗಳು
• ಗದ್ದಲವಿರುವ, ಮಂದ ಬೆಳಕಿರುವ ಸ್ಥಳಗಳಲ್ಲಿಯೂ ಸಹ ಅದ್ಭುತ ರೆಸಲ್ಯೂಷನ್ ಮತ್ತು ಸ್ಪಷ್ಟವಾದ ಆಡಿಯೊ ಇರುವ ನಯವಾದ ವೀಡಿಯೊಗಳನ್ನು ರೆಕಾರ್ಡ್ ಮಾಡಿ
• ಸಿನಿಮ್ಯಾಟಿಕ್ ಬ್ಲರ್ - ನಿಮ್ಮ ವಿಷಯದ ಹಿಂದಿರುವ ಹಿನ್ನೆಲೆಯನ್ನು ಬ್ಲರ್ ಮಾಡುವ ಮೂಲಕ ಸಿನಿಮ್ಯಾಟಿಕ್ ಎಫೆಕ್ಟ್ ಅನ್ನು ರಚಿಸಿ
• ಸಿನಿಮ್ಯಾಟಿಕ್ ಪ್ಯಾನ್ - ನಿಮ್ಮ ಫೋನ್‌ನ ಪ್ಯಾನಿಂಗ್ ಚಲನೆಗಳನ್ನು ನಿಧಾನಗೊಳಿಸಿ
• ಲಾಂಗ್ ಶಾಟ್ - ಡೀಫಾಲ್ಟ್ ಫೋಟೋ ಮೋಡ್‌ನಲ್ಲಿರುವಾಗ ಶಟರ್ ಕೀ ಅನ್ನು ದೀರ್ಘಕಾಲ ಒತ್ತಿಹಿಡಿಯುವ ಮೂಲಕ ಸಾಂದರ್ಭಿಕ, ತ್ವರಿತ ವೀಡಿಯೊಗಳನ್ನು ತೆಗೆಯಿರಿ
Pixel 8 Pro ಗಾಗಿ ಮಾತ್ರ ವಿಶೇಷ ಫೀಚರ್‌ಗಳು
• 50MP ಹೆಚ್ಚಿನ ರೆಸಲ್ಯೂಷನ್ - ಅತ್ಯುನ್ನತ ವಿವರಗಳಿರುವ ಹೆಚ್ಚಿನ ರೆಸಲ್ಯೂಷನ್ ಫೋಟೋಗಳನ್ನು ತೆಗೆಯಿರಿ
• ಪ್ರೊಫೆಷನಲ್ ಕಂಟ್ರೋಲ್‌ಗಳು - ಫೋಕಸ್, ಶಟರ್ ಸ್ಪೀಡ್ ಮತ್ತು ಇನ್ನೂ ಹೆಚ್ಚಿನವುಗಳಂತಹ ಅಂಶಗಳನ್ನು ಹೊಂದಿಸುವ ಸಾಮರ್ಥ್ಯದೊಂದಿಗೆ ಇನ್ನೂ ಹೆಚ್ಚಿನ ಸೃಜನಾತ್ಮಕ ಕಂಟ್ರೋಲ್ ಅನ್ನು ಪಡೆಯಿರಿ
ಅವಶ್ಯಕತೆಗಳು - Pixel ಕ್ಯಾಮರಾದ ಇತ್ತೀಚಿನ ಆವೃತ್ತಿಯು Android 14 ಮತ್ತು ನಂತರದ ಆವೃತ್ತಿಗಳು ರನ್ ಆಗುತ್ತಿರುವ Pixel ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. Wear OS ಗಾಗಿ Pixel ಕ್ಯಾಮರಾದ ಇತ್ತೀಚಿನ ಆವೃತ್ತಿಯು Pixel ಫೋನ್‌ಗಳಿಗೆ ಕನೆಕ್ಟ್ ಆಗಿರುವ Wear OS 3 (ಮತ್ತು ನಂತರದವು) ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಕೆಲವು ಫೀಚರ್‌ಗಳು ಎಲ್ಲಾ ಸಾಧನಗಳಲ್ಲಿ ಲಭ್ಯವಿರುವುದಿಲ್ಲ.
ಅಪ್‌ಡೇಟ್ ದಿನಾಂಕ
ನವೆಂ 22, 2024