ನೀವು ಸೈನ್ ಇನ್ ಮಾಡಿದಾಗ ಎರಡನೇ ಹಂತದ ಪರಿಶೀಲನೆಯೊಂದನ್ನು ಸೇರಿಸುವ ಮೂಲಕ Google Authenticator ನಿಮ್ಮ ಆನ್‌ಲೈನ್ ಖಾತೆಗಳಿಗೆ ಹೆಚ್ಚುವರಿ ಸುರಕ್ಷತಾ ಪದರವನ್ನು ಸೇರಿಸುತ್ತದೆ. ಇದರರ್ಥ, ನಿಮ್ಮ ಪಾಸ್‌ವರ್ಡ್ ಜೊತೆಗೆ, ನಿಮ್ಮ ಫೋನ್‌ನಲ್ಲಿ Google Authenticator ಆ್ಯಪ್ ಮೂಲಕ ರಚಿಸಲಾದ ಕೋಡ್ ಅನ್ನು ಸಹ ನೀವು ನಮೂದಿಸಬೇಕಾಗುತ್ತದೆ. ನೀವು ನೆಟ್‌ವರ್ಕ್ ಅಥವಾ ಸೆಲ್ಯುಲಾರ್ ಸಂಪರ್ಕವೊಂದನ್ನು ಹೊಂದಿಲ್ಲದಿದ್ದರೂ ಸಹ, ನಿಮ್ಮ ಫೋನ್‌ನಲ್ಲಿ Google Authenticator ಆ್ಯಪ್ ಮೂಲಕ ಪರಿಶೀಲನೆ ಕೋಡ್ ಅನ್ನು ರಚಿಸಬಹುದು.
* ನಿಮ್ಮ Authenticator ಕೋಡ್‌ಗಳನ್ನು ನಿಮ್ಮ Google ಖಾತೆಗೆ ಮತ್ತು ನಿಮ್ಮ ಸಾಧನಗಳಾದ್ಯಂತ ಸಿಂಕ್ ಮಾಡಿ. ಈ ರೀತಿಯಾಗಿ, ನಿಮ್ಮ ಫೋನ್ ಅನ್ನು ನೀವು ಕಳೆದುಕೊಂಡರೂ ಸಹ ನೀವು ಯಾವಾಗಲೂ ಅವುಗಳನ್ನು ಆ್ಯಕ್ಸೆಸ್ ಮಾಡಬಹುದು.
* QR ಕೋಡ್‌ನೊಂದಿಗೆ ನಿಮ್ಮ Authenticator ಖಾತೆಗಳನ್ನು ಸ್ವಯಂಚಾಲಿತವಾಗಿ ಸೆಟ್ ಮಾಡಿ. ಇದು ತ್ವರಿತ ಮತ್ತು ಸುಲಭವಾಗಿದೆ ಮತ್ತು ನಿಮ್ಮ ಕೋಡ್‌ಗಳನ್ನು ಸರಿಯಾಗಿ ಸೆಟ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
* ಬಹು ಸಂಖ್ಯೆಯ ಖಾತೆಗಳಿಗೆ ಬೆಂಬಲ. ಬಹು ಸಂಖ್ಯೆಯ ಖಾತೆಗಳನ್ನು ನಿರ್ವಹಿಸಲು ನೀವು Authenticator ಆ್ಯಪ್ ಅನ್ನು ಬಳಸಬಹುದು, ಇದರಿಂದ ನೀವು ಪ್ರತಿ ಬಾರಿ ಸೈನ್ ಇನ್ ಮಾಡಿದಾಗ ಆ್ಯಪ್‌ಗಳ ನಡುವೆ ಬದಲಾಯಿಸಬೇಕಾಗುವುದಿಲ್ಲ.
* ಸಮಯ-ಆಧಾರಿತ ಮತ್ತು ಕೌಂಟರ್-ಆಧಾರಿತ ಕೋಡ್ ರಚನೆಗಾಗಿ ಬೆಂಬಲ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಕೋಡ್ ರಚನೆಯ ಪ್ರಕಾರವನ್ನು ನೀವು ಆಯ್ಕೆ ಮಾಡಬಹುದು.
* QR ಕೋಡ್‌ನೊಂದಿಗೆ ಸಾಧನಗಳ ನಡುವೆ ಖಾತೆಗಳನ್ನು ವರ್ಗಾಯಿಸಿ. ನಿಮ್ಮ ಖಾತೆಗಳನ್ನು ಹೊಸ ಸಾಧನವೊಂದಕ್ಕೆ ಸರಿಸಲು ಇದೊಂದು ಅನುಕೂಲಕರ ಮಾರ್ಗವಾಗಿದೆ.
* Google ನೊಂದಿಗೆ Google Authenticator ಅನ್ನು ಬಳಸಲು, ನಿಮ್ಮ Google ಖಾತೆಯಲ್ಲಿ ನೀವು 2-ಹಂತದ ದೃಢೀಕರಣವನ್ನು ಸಕ್ರಿಯಗೊಳಿಸಬೇಕು. ಪ್ರಾರಂಭಿಸಲು http://www.google.com/2step ಗೆ ಭೇಟಿ ನೀಡಿ ಅನುಮತಿ ಸೂಚನೆ: ಕ್ಯಾಮರಾ: QR ಕೋಡ್‌ಗಳನ್ನು ಬಳಸಿಕೊಂಡು ಖಾತೆಗಳನ್ನು ಸೇರಿಸುವ ಅಗತ್ಯವಿದೆ
ಅಪ್‌ಡೇಟ್ ದಿನಾಂಕ
ನವೆಂ 14, 2024