Google ಕೀಬೋರ್ಡ್ ಕುರಿತು ನೀವು ಇಷ್ಟಪಡುವ ಎಲ್ಲವೂ Gboard ನಲ್ಲಿದೆ— ಇದು ವೇಗಭರಿತ ಮತ್ತು ವಿಶ್ವಾಸಾರ್ಹ ಉತ್ಪನ್ನವಾಗಿದ್ದು, ಗ್ಲೈಡ್ ಟೈಪಿಂಗ್, ಧ್ವನಿ ಟೈಪಿಂಗ್, ಕೈಬರಹ ಹಾಗೂ ಇನ್ನೂ ಹಲವಾರು ವೈಶಿಷ್ಟಗಳನ್ನು ಹೊಂದಿದೆ
ಗ್ಲೈಡ್ ಟೈಪಿಂಗ್ — ಅಕ್ಷರದಿಂದ ಅಕ್ಷರಕ್ಕೆ ನಿಮ್ಮ ಬೆರಳನ್ನು ಸ್ಲೈಡ್ ಮಾಡುವ ಮೂಲಕ ತ್ವರಿತವಾಗಿ ಟೈಪ್ ಮಾಡಿ
ಧ್ವನಿ ಟೈಪಿಂಗ್ — ಪ್ರಯಾಣದಲ್ಲಿರುವಾಗ ಪಠ್ಯವನ್ನು ಸುಲಭವಾಗಿ ಹೇಳಿ ಬರೆಯಿಸಿ
ಕೈಬರಹ* — ಕೂಡು ಅಕ್ಷರಗಳು ಮತ್ತು ಮುದ್ರಿತ ಅಕ್ಷರಗಳಲ್ಲಿ ಬರೆಯಿರಿ
ಎಮೋಜಿ ಹುಡುಕಾಟ* — ನಿಮಗೆ ಬೇಕೆನಿಸುವ ಎಮೋಜಿಯನ್ನು ತ್ವರಿತವಾಗಿ ಹುಡುಕಿ
GIF ಗಳು* — ಪರಿಪೂರ್ಣ ಪ್ರತಿಕ್ರಿಯೆಯನ್ನು ನೀಡಲು GIF ಗಳನ್ನು ಹುಡುಕಿ ಮತ್ತು ಹಂಚಿಕೊಳ್ಳಿ.
ಬಹುಭಾಷಾ ಟೈಪಿಂಗ್ — ಇನ್ನು ಮುಂದೆ ಹಸ್ತಚಾಲಿತವಾಗಿ ಭಾಷೆಗಳ ನಡುವೆ ಬದಲಾಯಿಸಬೇಕಾಗಿಲ್ಲ. Gboard ಇದನ್ನು ನಿಮ್ಮ ಸಕ್ರಿಯಗೊಳಿಸಲಾದ ಯಾವುದೇ ಭಾಷೆಗಳಿಂದ ಸ್ವಯಂ ಸರಿಪಡಿಸುತ್ತದೆ ಮತ್ತು ಸಲಹೆಯನ್ನು ನೀಡುತ್ತದೆ.
Google Translate — ನೀವು ಕೀಬೋರ್ಡ್‌ನಲ್ಲಿ ಟೈಪ್ ಮಾಡಿದಂತೆ ಪಠ್ಯವನ್ನು ಅನುವಾದಿಸಿ
* Android Go ಸಾಧನಗಳಲ್ಲಿ ಬೆಂಬಲಿತವಾಗಿಲ್ಲ
ನೂರಾರು ವೈವಿಧ್ಯಮಯ ಭಾಷೆಗಳು, ಅವುಗಳೆಂದರೆ:
ಆಫ್ರಿಕಾನ್ಸ್, ಅಂಹಾರಿಕ್, ಅರೇಬಿಕ್, ಅಸ್ಸಾಮೀಸ್, ಅಜೆರ್ಬೈಜಾನಿ, ಬವೇರಿಯನ್, ಬಂಗಾಳಿ, ಭೋಜ್‌ಪುರಿ, ಬರ್ಮೀಸ್, ಸೆಬ್ಯುವಾನೊ, ಛತ್ತೀಸ್ ಘರ್ಹಿ, ಚೈನೀಸ್ (ಮ್ಯಾಂಡರಿನ್, ಕ್ಯಾಂಟೋನೀಸ್ ಮತ್ತು ಇತರ), ಚಿತ್ತಾಗೋನಿಯನ್, ಜೆಕ್, ಡೆಕ್ಕನ್, ಡಚ್, ಇಂಗ್ಲಿಷ್, ಫಿಲಿಪಿನೋ, ಫ್ರೆಂಚ್, ಜರ್ಮನ್, ಗ್ರೀಕ್, ಗುಜರಾತಿ, ಹೌಸಾ, ಹಿಂದಿ, ಇಗ್ಬೋ, ಇಂಡೋನೇಷ್ಯನ್, ಇಟಾಲಿಯನ್, ಜಪಾನೀಸ್, ಜವಾನೀಸ್, ಕನ್ನಡ, ಖಮೇರ್, ಕೊರಿಯನ್, ಕುರ್ದಿಷ್, ಮಗಾಹಿ, ಮೈಥಿಲಿ, ಮಲಾಯ್, ಮಲಯಾಳಂ, ಮರಾಠಿ, ನೇಪಾಳಿ, ಉತ್ತರ ಸೋಥೋ, ಒಡಿಯಾ, ಪಾಶ್ಟೋ, ಪರ್ಷಿಯನ್, ಪೋಲಿಷ್, ಪೋರ್ಚುಗೀಸ್, ಪಂಜಾಬಿ, ರೊಮೇನಿಯನ್, ರಷ್ಯನ್, ಸರಾಯ್ಕಿ, ಸಿಂಧಿ, ಸಿಂಹಳ, ಸೊಮಾಲಿ, ದಕ್ಷಿಣ ಸೋಥೋ, ಸ್ಪ್ಯಾನಿಷ್, ಸುಂಡಾನೀಸ್, ಸ್ವಾಹಿಲಿ, ತಮಿಳು, ತೆಲುಗು, ಥಾಯ್, ಸ್ವಾನಾ, ಟರ್ಕಿಶ್, ಉಕ್ರೇನಿಯನ್, ಉರ್ದು, ಉಜ್ಬೇಕ್, ವಿಯೆಟ್ನಾಮೀಸ್, ಕ್ಸೋಸಾ, ಯೊರುಬಾ, ಜುಲು ಮತ್ತು ಇನ್ನೂ ಹಲವಾರು ಭಾಷೆಗಳು! ಬೆಂಬಲಿತ ಭಾಷೆಗಳ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು https://goo.gl/fMQ85U ಗೆ ಭೇಟಿ ನೀಡಿ
ತಜ್ಞರ ಸಲಹೆಗಳು:
• ಗೆಸ್ಚರ್ ಕರ್ಸರ್ ನಿಯಂತ್ರಣ: ಕರ್ಸರ್ ಅನ್ನು ಸರಿಸಲು ಸ್ಪೇಸ್ ಬಾರ್‌ನಾದ್ಯಂತ ನಿಮ್ಮ ಬೆರಳನ್ನು ಸ್ಲೈಡ್ ಮಾಡಿ
• ಗೆಸ್ಚರ್ ಅಳಿಸಿ: ಬಹು ಪದಗಳನ್ನು ತ್ವರಿತವಾಗಿ ಅಳಿಸಲು ಅಳಿಸುವಿಕೆ ಕೀಯಿಂದ ಎಡಕ್ಕೆ ಸ್ಲೈಡ್ ಮಾಡಿ
• ಸಂಖ್ಯೆಯ ಅಡ್ಡಸಾಲನ್ನು ಎಲ್ಲಾ ಸಮಯದಲ್ಲೂ ಲಭ್ಯವಾಗಿರುವಂತೆ ಮಾಡಿ (ಸೆಟ್ಟಿಂಗ್‌ಗಳು → ಪ್ರಾಶಸ್ತ್ಯಗಳು → ಸಂಖ್ಯೆಯ ಅಡ್ಡಸಾಲು ಎಂಬಲ್ಲಿ ಸಕ್ರಿಯಗೊಳಿಸಿ)
• ಚಿಹ್ನೆಗಳ ಸುಳಿವು: ದೀರ್ಘ ಒತ್ತುವಿಕೆಯ ಮೂಲಕ ಸಂಕೇತಗಳನ್ನು ಪ್ರವೇಶಿಸಲು ನಿಮ್ಮ ಕೀಗಳಲ್ಲಿ ತ್ವರಿತ ಸುಳಿವುಗಳನ್ನು ತೋರಿಸಿ (ಸೆಟ್ಟಿಂಗ್‌ಗಳು → ಪ್ರಾಶಸ್ತ್ಯಗಳು → ಸಂಕೇತಗಳಿಗೆ 'ದೀರ್ಘವಾಗಿ ಒತ್ತಿ' ಎಂಬಲ್ಲಿ ಸಕ್ರಿಯಗೊಳಿಸಿ)
• ಒಂದು ಕೈ ಮೋಡ್: ದೊಡ್ಡ ಸ್ಕ್ರೀನ್ ಫೋನ್‌ಗಳಲ್ಲಿ, ಕೀಬೋರ್ಡ್ ಅನ್ನು ಸ್ಕ್ರೀನ್‌ನ ಎಡಕ್ಕೆ ಅಥವಾ ಬಲಕ್ಕೆ ಪಿನ್ ಮಾಡಿ
• ಥೀಮ್‌ಗಳು: ಕೀ ಅಂಚುಗಳು ಇರುವ ಅಥವಾ ಇಲ್ಲದಿರುವ, ನಿಮ್ಮ ಸ್ವಂತ ಥೀಮ್ ಅನ್ನು ಆಯ್ಕೆಮಾಡಿ
ಅಪ್‌ಡೇಟ್ ದಿನಾಂಕ
ನವೆಂ 21, 2024