Meta ನಿಂದ WhatsApp Business
WhatsApp ನಲ್ಲಿ ವಹಿವಾಟು ಅಸ್ತಿತ್ವವನ್ನು ಹೊಂದಲು, ನಿಮ್ಮ ಗ್ರಾಹಕರೊಂದಿಗೆ ಹೆಚ್ಚು ದಕ್ಷವಾಗಿ ಸಂವಹನ ನಡೆಸಲು ಮತ್ತು ನಿಮ್ಮ ವಹಿವಾಟು ಪ್ರಗತಿ ಸಾಧಿಸಲು ನೆರವಾಗುವುದಕ್ಕಾಗಿ WhatsApp Business ಅನುವು ಮಾಡುತ್ತದೆ.
ನೀವು ಪ್ರತ್ಯೇಕ ವಹಿವಾಟು ಮತ್ತು ವೈಯಕ್ತಿಕ ಫೋನ್ ಸಂಖ್ಯೆಗಳನ್ನು ಹೊಂದಿದ್ದರೆ, WhatsApp Business ಮತ್ತು WhatsApp ಮೆಸೆಂಜರ್ ಅನ್ನು ಒಂದೇ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು ಮತ್ತು ವಿಭಿನ್ನ ಸಂಖ್ಯೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
WhatsApp ಮೆಸೆಂಜರ್ ನಲ್ಲಿರುವ ಸೌಲಭ್ಯಗಳ ಜೊತೆಗೆ WhatsApp Business ಈ ಕೆಳಗಿನ ಸೌಲಭ್ಯಗಳನ್ನೂ ಹೊಂದಿರುತ್ತದೆ:
• ವ್ಯಾವಹಾರಿಕ ಪ್ರೊಫೈಲ್: ನಿಮ್ಮ ವೆಬ್‌ಸೈಟ್, ಸ್ಥಳ ಅಥವಾ ಸಂಪರ್ಕ ಮಾಹಿತಿಯಂತಹ ಮೌಲ್ಯಯುತ ಮಾಹಿತಿಯನ್ನು ನಿಮ್ಮ ಗ್ರಾಹಕರು ಕಂಡುಕೊಳ್ಳಲು ಸಹಾಯವಾಗುವಂತೆ ನಿಮ್ಮ ವಹಿವಾಟಿಗೆ ಪ್ರೊಫೈಲ್ ರಚಿಸಿ.
• ವಹಿವಾಟಿನ ಬಗ್ಗೆ ಸಂದೇಶ ಕಳುಹಿಸುವ ಪರಿಕರಗಳು: ನೀವು ದೂರವಿದ್ದೀರಿ ಎಂಬುದನ್ನು ಸೂಚಿಸಲು ದೂರ ಸಂದೇಶವನ್ನು ಬಳಸುವುದು ಅಥವಾ ನಿಮ್ಮ ಗ್ರಾಹಕರು ಮೊದಲ ಬಾರಿಗೆ ಸಂದೇಶ ಕಳುಹಿಸಿದಾಗ ಪರಿಚಯ ಸಂದೇಶವನ್ನು ಕಳುಹಿಸಲು ಶುಭಾಶಯ ಸಂದೇಶವನ್ನು ಬಳಸಿ ನಿಮ್ಮ ಗ್ರಾಹಕರಿಗೆ ಇನ್ನಷ್ಟು ಪ್ರತಿಕ್ರಿಯಾತ್ಮಕವಾಗಿ ವರ್ತಿಸಿ.
• ಲ್ಯಾಂಡ್‌ಲೈನ್/ಫಿಕ್ಸೆಡ್ ಸಂಖ್ಯೆ ಬೆಂಬಲ: WhatsApp Business ನಲ್ಲಿ ನೀವು ಲ್ಯಾಂಡ್‌ಲೈನ್ (ಅಥವಾ ಫಿಕ್ಸೆಡ್) ಫೋನ್ ನಂಬರ್ ಅನ್ನು ಬಳಸಬಹುದು ಮತ್ತು ಗ್ರಾಹಕರು ಆ ಸಂಖ್ಯೆಯನ್ನು ಬಳಸಿ ಸಂದೇಶ ಕಳುಹಿಸಬಹುದು. ಪರಿಶೀಲನೆ ವೇಳೆ, ಫೋನ್ ಕರೆಯಲ್ಲಿ ಕೋಡ್ ಸ್ವೀಕರಿಸಲು “ನನಗೆ ಕರೆ ಮಾಡಿ” ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
• WHATSAPP ಮೆಸೆಂಜರ್ ಮತ್ತು WHATSAPP BUSINESS ಎರಡನ್ನೂ ಬಳಸಿ: WhatsApp Business ಮತ್ತು WhatsApp ಮೆಸೆಂಜರ್ ಅನ್ನು ನೀವು ಒಂದೇ ಫೋನ್‌ನಲ್ಲಿ ಬಳಸಬಹದು. ಆದರೆ ಪ್ರತಿ ಆಪ್ ಬೇರೆ ಬೇರೆ ಫೋನ್ ನಂಬರ್ ಅನ್ನು ಹೊಂದಿರಬೇಕು.
• WHATSAPP WEB: ನಿಮ್ಮ ಕಂಪ್ಯೂಟರಿನ ಬ್ರೌಸರಿನಲ್ಲೇ ನಿಮ್ಮ ಗ್ರಾಹಕರಿಗೆ ದಕ್ಷವಾಗಿ ಪ್ರತಿಕ್ರಿಯೆ ನೀಡಬಹುದು.
WhatsApp Business ಅನ್ನು WhatsApp ಮೆಸೆಂಜರ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಪ್ರಮುಖ ಎಲ್ಲ ಸೌಲಭ್ಯಗಳನ್ನೂ ಒಳಗೊಂಡಿದೆ. ಮಲ್ಟಿಮೀಡಿಯಾ ಕಳುಹಿಸುವ ಸಾಮರ್ಥ್ಯ, ಉಚಿತ ಕರೆಗಳನ್ನು ಮಾಡುವುದು*, ಉಚಿತ ಅಂತಾರಾಷ್ಟ್ರೀಯ ಸಂದೇಶ ಕಳುಹಿಸುವ ಸೌಲಭ್ಯ*, ಗ್ರೂಪ್ ಚಾಟ್, ಆಫ್‌ಲೈನ್ ಸಂದೇಶಗಳು ಮತ್ತು ಇನ್ನಷ್ಟನ್ನು ಮಾಡಬಹುದು.
*ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.
ಟಿಪ್ಪಣಿ: WhatsApp ಮೆಸೆಂಜರ್‌ನಿಂದ WhatsApp Business ಗೆ ಚಾಟ್ ಬ್ಯಾಕ್‌ಅಪ್‌ಅನ್ನು ಒಮ್ಮೆ ನೀವು ರಿಸ್ಟೋರ್ ಮಾಡಿದರೆ, WhatsApp ಮೆಸೆಂಜರ್‌ಗೆ ಪುನಃ ರಿಸ್ಟೋರ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ವಾಪಸಾಗಲು ಬಯಸಿದರೆ, WhatsApp Business ಅನ್ನು ಆರಂಭಿಸಲು ಬಳಸುವುದಕ್ಕೂ ಮುನ್ನವೇ ನಿಮ್ಮ ಕಂಪ್ಯೂಟರ್‌ಗೆ WhatsApp ಮೆಸೆಂಜರ್ ಬ್ಯಾಕ್‌ಅಪ್ ಪ್ರತಿಯನ್ನು ನಕಲು ಮಾಡಿ ಎಂದು ನಾವು ಶಿಫಾರಸು ಮಾಡುತ್ತೇವೆ.
---------------------------------------------------------
ನಿಮ್ಮಿಂದ ಪ್ರತಿಕ್ರಿಯೆ ಕೇಳಲು ನಾವು ಎಂದಿಗೂ ಉತ್ಸುಕರಾಗಿದ್ದೇವೆ! ನೀವು ಯಾವುದೇ ಪ್ರತಿಕ್ರಿಯೆ, ಪ್ರಶ್ನೆಗಳು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ಇಲ್ಲಿಗೆ ನಮಗೆ ದಯವಿಟ್ಟು ಇಮೇಲ್ ಮಾಡಿ:
[email protected]ಅಥವಾ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ:
http://twitter.com/WhatsApp
WhatsApp
---------------------------------------------------------